INTERNATIONAL JOURNAL OF SCIENTIFIC DEVELOPMENT AND RESEARCH International Peer Reviewed & Refereed Journals, Open Access Journal ISSN Approved Journal No: 2455-2631 | Impact factor: 8.15 | ESTD Year: 2016
open access , Peer-reviewed, and Refereed Journals, Impact factor 8.15
ಹೈದರಾಬಾದ್ ಕರ್ನಾಟಕದಲ್ಲಿ ಸ್ವಾತಂತ್ರ್ಯೂ ಪೂರ್ವ ದಲಿತ ಚಳುವಳಿ: ಚಾರಿತ್ರಿಕ ವಿಶ್ಲೇಷಣೆ
Authors Name:
ಯಮನೂರಪ್ಪ ವ್ಯಾಕರನಾಳ
Unique Id:
IJSDR2308039
Published In:
Volume 8 Issue 8, August-2023
Abstract:
ಹೈದರಾಬಾದ್ ಕರ್ನಾಟಕ ಕರ್ನಾಟಕದ ಉತ್ತರ ಪೂರ್ವ ಇಲ್ಲವೇ ಈಶಾನ್ಯ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶವು ಬೀದರ್ ಕಲಬುರಗಿ ಯಾದಗಿರಿ ರಾಯಚೂರು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡಿದೆ. ಕರ್ನಾಟಕದಲ್ಲೇ ಈ ಭಾಗವು ಹಿಂದುಳಿದ ಪ್ರದೇಶ ಎಂಬುವುದು ಎಲ್ಲರಿಗೂ ಚಿರ ಪರಿಚಯವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮೊದಲ ಗೊಂಡು ಮಾನವ ಅಭಿವೃದ್ಧಿ ಅಂಕಿ ಸಂಖ್ಯೆಗಳು ಹೇಳುವಂತೆ ಈ ಪ್ರದೇಶ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೇ ಅತ್ತಿ ಹಿಂದುಳಿದ ಪ್ರದೇಶ. ಈ ಹಿಂದುಳಿವಿಕೆಗೆ ಹಲವಾರು ಕಾರಣಗಳಿವೆ. ಈ ಪ್ರದೇಶದಲ್ಲಿ ಜನರಿಗೆ ಕುಡಿಯುವ ನೀರು ಆಹಾರ ವಸತಿ ಆರೋಗ್ಯ ಶಾಲೆ ಶಿಕ್ಷಣ ಮೊದಲಾದ ಮೂಲಭೂತ ಸೌಲಭ್ಯಗಳಿಂದ ಇಲ್ಲಿನ ಸಂಪ್ರದಾಯಿಕ ಜನಪ್ರತಿನಿದಿಗಳು ಸಾಮಾನ್ಯ ಜನರಿಗೆ ಸಿಗದೇ ಇರುವ ರೀತಿಯಲ್ಲಿ ಬಹಳ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದ್ದಾರೆ ಎಂಬುವುದನ್ನು ಕಡೆಗಣಿಸಲಾಗದು. ಹೈದರಾಬಾದ್ ಕರ್ನಾಟಕದಲ್ಲಿ ಪ್ರಾಕೃತಿಕವಾಗಿ ಹರಿಯುವ ಕೃಷ್ಣಾ, ತುಂಗಭದ್ರ ಹಾಗೂ ಭಿಮಾ ಈ ಭಾಗದ ಬಹಳ ದೊಡ್ಡ ನದಿಯಾಗಿದೆ. ಈ ನದಿಗಳು ಈ ಭಾಗದ ಬಹುಭಾಗಕ್ಕೆ ನೀರಿನ ನೆಲೆಗಳಾಗಿವೆ. ಇವುಗಳೊಂದಿಗೆ ಈ ಪ್ರದೇಶದುದ್ದಕ್ಕೂ ಹಲವಾರು ನಗರ, ಉಪನಗರ ಹಾಗೂ ಚಿಕ್ಕಪುಟ್ಟ ಹಳ್ಳಿಗಳಿಂದ ಕೂಡಿಕೊಂಡಿದೆ. ಕುಡಿಯುವ ನೀರು, ಒಕ್ಕಲುತನಕ್ಕಾಗಿ ಹಾಗೂ ಜನರ ಬದುಕು ಬವಣೆಗಳಿಗೆ ಅನುಕೂಲಕರವಾಗುವಂತೆ ಆಯಾ ಕಾಲಕ್ಕೆ ತಕ್ಕಂತೆ ಕೆರೆ ಬಾವಿಗಳನ್ನು ಕಟ್ಟಿಸಿರುವುದು ಇಂದಿಗೂ ಕಂಡುಬರುತ್ತದೆ. ಸ್ವತಂತ್ರ ನಂತರ ಕೃಷ್ಣಾ ನದಿಗೆ ಕಟ್ಟಿರುವ ಬಹುದೊಡ್ಡ ಆಲಮಟ್ಟಿ ಅಣೆಕಟ್ಟು ಆ ನೀರಿನ ಕೇಂದ್ರವಾಗಿ ನಿರ್ಮಿಸಿರುವ ಬಸವಸಾಗರ ರಾಯಚೂರಿನ ಲಿಂಗಸಗೂರು ತಾಲೂಕಿನಲ್ಲಿರುವುದನ್ನು ನೋಡಬಹುದು. ಯಾದಗಿರಿ ರಾಯಚೂರು ಕೊಪ್ಪಳ ಜಿಲ್ಲೆಗಳ ಒಕ್ಕಲುತನಕ್ಕೆ ಇದು ನೀರಿನ ಕೇಂದ್ರವಾಗಿದೆ.
Keywords:
ಹೈದರಾಬಾದ್ ಕರ್ನಾಟಕ ಭೌಗೋಳಿಕತೆ, ಬಸವ ಚಳವಳಿ, ಬಿ ಶ್ಯಾಮಸುಂದರ್ ಕಾಲದ ದಲಿತ ಚಳವಳಿ.
Cite Article:
"ಹೈದರಾಬಾದ್ ಕರ್ನಾಟಕದಲ್ಲಿ ಸ್ವಾತಂತ್ರ್ಯೂ ಪೂರ್ವ ದಲಿತ ಚಳುವಳಿ: ಚಾರಿತ್ರಿಕ ವಿಶ್ಲೇಷಣೆ", International Journal of Science & Engineering Development Research (www.ijsdr.org), ISSN:2455-2631, Vol.8, Issue 8, page no.286 - 289, August-2023, Available :http://www.ijsdr.org/papers/IJSDR2308039.pdf
Downloads:
000338721
Publication Details:
Published Paper ID: IJSDR2308039
Registration ID:208134
Published In: Volume 8 Issue 8, August-2023
DOI (Digital Object Identifier):
Page No: 286 - 289
Publisher: IJSDR | www.ijsdr.org
ISSN Number: 2455-2631
Facebook Twitter Instagram LinkedIn